ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಿಂಪಡಣೆ by RFIS-ADVISORIES published on 2022-08-13T08:29:16Z ನಮಸ್ಕಾರ, ಸಹೋದರ ಸಹೋದರಿಯರೇ, ರಿಲಯನ್ಸ್ ಫೌಂಡೇಶನ್ ಪರವಾಗಿ , ನಿಮಗೆ 75 ನೇ ವರ್ಷದ "ಸ್ವಾತಂತ್ರ್ಯ ಅಮೃತ ಮಹೋತ್ಸವ" ದಿನಾಚರಣೆಯ ಶುಭಾಶಯಗಳು. ಸಾಂಪ್ರದಾಯಿಕ ಯೂರಿಯಾ ಬಿಳಿ ಹರಳು ರೂಪದಲ್ಲಿ ಬರುತ್ತದೆ. 500 ಮಿಲಿ ಬಾಟಲಿಯಲ್ಲಿ ಕೇವಲ 45 ಕೆಜಿ ನ್ಯಾನೋ ಯೂರಿಯಾ ಹಿಡಿಯುವಷ್ಟು ತಯಾರಿಸಲಾಗಿದೆ. ಒಂದು ಚೀಲದ ಯೂರಿಯಾದಲ್ಲಿ ದೊರೆಯುವ ಪೋಷಕಾಂಶಗಳು ಕೇವಲ ಈ ಸಣ್ಣ ಬಾಟಲಿಯಲ್ಲಿ ಲಭ್ಯವಾಗುತ್ತದೆ. ರೈತರು ನ್ಯಾನೋ ಯೂರಿಯಾವನ್ನು (500 ಮಿಲೀ) ಸುಲಭವಾಗಿ ಸಂಗ್ರಹಿಸಬಹುದು. ರೈತರ ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುವುದರಾ ಜೊತೆಗೆ ಬೆಳೆ ಇಳುವರಿಯನ್ನು ಹೆಚ್ಚಿಸುತ್ತದೆ ಇದರಿಂದ ರೈತರ ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪ್ರತಿ ಲೀಟರ್ ನೀರಿಗೆ 2 ಮಿಲೀ ನ್ಯಾನೋ ಯೂರಿಯಾವನ್ನು ಬೆಳೆಯು ಬೆಳೆಯುವ ಹಂತದಲ್ಲಿರುವಾಗ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ, ನೀವು ರಿಲಯನ್ಸ್ ಫೌಂಡೇಶನ್ನ ಉಚಿತ ಸಹಾಯವಾಣಿ 1800-419-8800 ಅನ್ನು ಸಂಪರ್ಕಿಸಬಹುದು, ಧನ್ಯವಾದಗಳು.