ಆಕಳಿನಲ್ಲಿ ಚರ್ಮ ಗಂಟುರೋಗದ ಲಕ್ಷಣಗಳು by RFIS-ADVISORIES published on 2022-08-13T08:29:13Z ನಮಸ್ಕಾರ, ಸಹೋದರ ಸಹೋದರಿಯರೇ, ರಿಲಯನ್ಸ್ ಫೌಂಡೇಶನ್ ಪರವಾಗಿ , ನಿಮಗೆ 75 ನೇ ವರ್ಷದ "ಸ್ವಾತಂತ್ರ್ಯ ಅಮೃತ ಮಹೋತ್ಸವ" ದಿನಾಚರಣೆಯ ಶುಭಾಶಯಗಳು. ಪ್ರಾಣಿಗಳಲ್ಲಿ ಚರ್ಮ ಗಂಟು ರೋಗದ ಪ್ರಾರಂಬಿಕ ಹಂತದಲ್ಲಿ ಎರಡರಿಂದ ಮೂರು ದಿನಗಳವರೆಗೆ ಸಾಧಾರಣ ಜ್ವರ ಕಾಣಿಸಿಕೊಳ್ಳುತ್ತದೆ. ಅದರ ನಂತರ ಇಡೀ ದೇಹದ ಚರ್ಮದ ಮೇಲೆ 2 ರಿಂದ 3 ಸೆಂ.ಮೀ. ಗಾತ್ರದ ಗಂಟುಗಳು ಹೊರಬರುತ್ತವೆ. ಈ ಗಂಟುಗಳನ್ನು ದುಂಡಾಗಿದ್ದು ಮತ್ತು ಚರ್ಮದಿಂದ ಸ್ನಾಯುಗಳಿಗೆಹರಡುತ್ತದೆ. ನಂತರ ಈ ಗಡ್ಡೆಗಳು ಬಾಯಿ, ಗಂಟಲು ಮತ್ತು ಶ್ವಾಸನಾಳಕ್ಕೆ ಹರಡುತ್ತದೆ. ಇದಲ್ಲದೆ, ಇದು ಆಕಳುಗಳ ಕಾಲುಗಳಲ್ಲಿ ಊತ, ಹಾಲಿನ ಉತ್ಪಾದಕತೆಯನ್ನು ಕಡಿಮೆ ಮಾಡುವುದು, ಗರ್ಭಪಾತ, ಬಂಜೆತನ, ನ್ಯುಮೋನಿಯಾ ಮತ್ತು ಕೆಲವೊಮ್ಮೆ ಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ನೀವು ರಿಲಯನ್ಸ್ ಫೌಂಡೇಶನ್ನ ಉಚಿತ ಸಹಾಯವಾಣಿ 1800-419-8800 ಅನ್ನು ಸಂಪರ್ಕಿಸಬಹುದು, ಧನ್ಯವಾದಗಳು.